ಗಡಿಯಾರದಂಗಡಿಯಲ್ಲಿ ಬಯಲು

ಗಡಿಯಾರದಂಗಡಿಯಲ್ಲಿ
ಟಿಕ್ಕು ಠಕ್ಕಿನ ತಾಳ!
ಕ್ಷಣಕ್ಷಣವೂ ಸಾಯುವ ಕ್ಷಣ!
ಚಂದ್ರ ತಾರೆ ನಿಹಾರಿಕೆಗಳ
ಅಗಣಿತ ಗಣ
ಸಾಯುತ್ತಾ ಹುಟ್ಟುತ್ತಾ
ಕಟ್ಟುತ್ತಾವೆ
ಹೊಸಕಾಲದ ಕಟ್ಟು!
ಬಿಚ್ಚಿಟ್ಟಿದ್ದೆಲ್ಲಾ ಬ್ರಹ್ಮಾಂಡದ ಪಾಲು!
ಸುಷುಮ್ನದಿಂದ ಸಹಸ್ರಾರದವರೆಗೆ
ಕಮಲಗಳ ಸಾಲು!

Continue reading

ಉಳಿದಿರುವುದೊಂದೇ ಬೀದಿ

ಸದ್ದಾಮನ ಪ್ರತಿಮೆಗೆ
ಹಗ್ಗ ನುಲಿದಿದ್ದಾರೆ
ಅಲ್ಲಾಹುವಿನ ಹೆಸರಲ್ಲಿ.
ನೆನಪಿನ ಚಿತ್ರಗಳಿಗೆ
ಯುದ್ಧ ಬೀಜದ ಮೊಳೆ ಜಡಿದಿದ್ದಾರೆ
ಜಿಹಾದಿನ ಹೆಸರಲ್ಲಿ.

ಹಿಂಸೆ ಕುದುರೆಯನೇರಿ
ಸುಖಿಸುತಿದೆ ಜಗ
ಯಾರು ಯಾರಿಗೆ ಮಗ?
ಯಾರಿಗೆ ಯಾವ ರೋಗ?

Continue reading

ಗಾಂಧಿ – ಗಂಧ

ರದ್ದಿ ರಾಶಿಯಲಿ…
ಸರಿಯುತ್ತವೆ ಕೈಗಳು.
ತಡುಕಿದರೆ ತುಕಡ, ತುಕಡಾ ಕನಸುಗಳು!
ರೆಕ್ಕೆ ಮುರಿದ ಗಿಳಿ!
ಚಕ್ರ ಇಲ್ಲದ ಕಾರು!
ಹೊಗೆಯುಗುಳದ ರೈಲು!
ಪ್ಲಾಸ್ಟಿಕ್ ಕಂಬಿ ಸಾಲು!

ಅಂದಗೆಟ್ಟ ಅಮೇರಿಕಾ –
 ಬೊಂಬೆಗಳ ಕಟ್ಟು.
ಒಂದೊಮ್ಮೆ ಷೋಕೇಸಲ್ಲಿದ್ದ
ನಗಿವಿನೊಳಗುಟ್ಟು – ರಟ್ಟು!

Continue reading

ಮಾಡರನ್ ಆಟ

ದಿಕ್ಕುಗಾಣದ ಹಾದಿ
ನಡೆದಷ್ಟೂ ನವೆಯದ ನೆನಪು.
ಹೊರಳು ಹಾಸಿಗೆಯಲಿ
ಕೊರಳು ಹಿಡಿದಿದೆ ಕೈ
ಯಾರದೋ ಮುಷ್ಟಿ?
ಯಾರದೋ ಮಸ್ತಿ!

ಬರೆ!
ಬರಗೆಟ್ಟ ಬಟಾಬಯಲಂತಿರುವ
ಹಾಳೆಗಳ ನೆತ್ತಿಯ ಮೇಲೆ,
ರಂಗವಲ್ಲಿಯ ತುಂತುರು
ಬಣ್ಣವಿಲ್ಲದ ಶಾಯಿ ಬರೆದದ್ದೇ ಚಿತ್ತಾರ!
ಕೊರೆ!
ಒಣಗಿದ ಹೆಬ್ಬಂಡೆಯ ಮೇಲೆ
ಹೆಸರುಳಿಸುವ ಸಾಹಸ,
ಆಡಂಸ್ಮಿತ್ತನ ಅರ್ಥಶಾಸ್ತ್ರಕ್ಕೆ ಹೊಂದದ
ಆಧುನಿಕ ಸರ್ಕಸ್ಸು!

Continue reading

ಈ ಕನಸೇ ಹಾಗೆ

ಒಂದು ಬದುಕಿನ ಸುತ್ತ
ನೂರೈವತ್ತು
ಕನಸಿನ ಹುತ್ತ
ಸುರುಳಿ ಸುತ್ತಿ ಕೂತ ಹಾವು… ಶತಕಂಠಿ!
ಗಡಚಿಕ್ಕುವ ಫೂತ್ಕಾರ
ನಿದ್ದೆಗೆಡಿಸುತ್ತವೆ ಬುಸುಗುಟ್ಟುತ್ತ ದ್ರಾಬೆ ಥರಾ!

ಕಳೆದುಕೊಳ್ಳುತ್ತವೆ
ಗೆದ್ದಿಲುಗಳು ಅರಮನೆ
ಅಲೆಯುತ್ತವೆ
ಹೀಗೇ ಸುಮ್ಮನೆ!

Continue reading