ಬಿ. ಸುರೇಶ ಪರಿಚಯ

೧೯೬೨ರಲ್ಲಿ ದಾವಣಗೆರೆಯಲ್ಲಿ ಜನಿಸಿದ ಬಿ.ಸುರೇಶ ಓದಿದ್ದು ಕುಂಭಕಲೆ. ೧೯೭೨ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಷೇಕ್ಸ್ಪಿಯರ್ನ ಮ್ಯಾಕ್ಬೆತ್, ಕಿಂಗ್ಲಿಯರ್ನಂತಹ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ `ಷಾಪುರದ ಸೀನಿಂಗಿ-ಸತ್ಯ’ ನಾಟಕವು ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

೧೯೭೬ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ `ಘಟಶ್ರಾದ್ಧ’ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಯಾತ್ರೆ ಆರಂಭ. ೧೯೮೮ರಲ್ಲಿ `ಮಿಥಿಲೆಯ ಸೀತೆಯರು’ [ನಿ: ಕೆ.ಎಸ್.ಎಲ್. ಸ್ವಾಮಿ (ರವೀ)] ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ. ಸುರೇಶ ಅಲ್ಲಿಂದಾಚೆಗೆ ೨೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ.

೧೯೯೨ರಿಂದ ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿಯಲಾರಂಭಿಸಿದ ಬಿ.ಸುರೇಶ ಅವರ ದೈನಿಕ ಧಾರಾವಾಹಿ `ಸಾಧನೆ’ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ೨೦೦೧ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಪಡೆದುಕೊಂಡಿತ್ತು.

`ಠಪೋರಿ’ ಮತ್ತು `ಅರ್ಥ’, ೨೦೧೦ರಲ್ಲಿ ‘ಪುಟ್ಟಕ್ಕನ ಹೈವೇ’  ನಿರ್ದೇಶಿಸಿದ್ದಾರೆ. `ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ೨೦೧೦ರಲ್ಲಿ ‘ಪುಟ್ಟಕ್ಕನ ಹೈವೇ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ ಪ್ರಶಸ್ತಿಯು ೫೮ನೇ ರಾಷ್ಟ್ರೀಯ ಪ್ರಶಸ್ತಿಯ ಸಾಲಿನಲ್ಲಿ ದೊರೆತಿದೆ.

೨೦೦೪ರಿಂದ ೨೦೦೯ರ ವರೆಗೆ ಇವರು ಬರೆದು ನಿರ್ದೇಶಿದ `ನಾಕುತಂತಿ’ ಧಾರಾವಾಹಿ ಉದಯ ವಾಹಿನಿಯಲ್ಲಿ ೧೪೦೦ ಕಂತುಗಳಷ್ಟು ಪ್ರಸಾರವಾಗಿದೆ. ಇದೇ ಉದಯ ವಾಹಿನಿಗಾಗಿ ಬಿ.ಸುರೇಶ ಅವರ ಸಾರಥ್ಯದಲ್ಲಿ ಪ್ರಸಾರವಾದ ಮತ್ತೊಂದು ಧಾರಾವಾಹಿ `ತಕಧಿಮಿತಾ’ ಸಹ ಈಗ ೮೯೧ ಕಂತುಗಳಿಗೆ (ಮಾರ್ಚ್‌ ೨೬, ೨೦೦೯) ಮುಕ್ತಾಯ ಕಂಡಿದೆ. ೨೦೧೦ರ ಅಕ್ಟೋಬರ್ ೧೪ರಿಂದ ಅದೇ ಉದಯ ವಾಹಿನಿಯಲ್ಲಿ ಪ್ರತಿ ಭಾನುವಾರ ‘ಪ್ರೀತಿ-ಪ್ರೇಮ’ ಎಂಬ ಹೆಸರಿನಲ್ಲಿ ಟೆಲಿಫಿಲ್ಮ್‌ಗಳು ಪ್ರಸಾರವಾಗುತ್ತಿದೆ.

ಬಿ.ಸುರೇಶ ಅವರು ಬರೆದಿರುವ ದೃಶ್ಯಮಾಧ್ಯಮ ಕುರಿತ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಲೇಖನಗಳ ಸಂಗ್ರಹ `ಬೆಳ್ಳಿಅಂಕ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಇದಲ್ಲದೆ `ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಸಂಸ್ಥೆಯನ್ನು ನಡೆಸುತ್ತಾ ಇರುವ ಬಿ.ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ.

ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಗಳನ್ನು ಆರಂಭಿಸಿರುವ ಬಿ.ಸುರೇಶ ಅವರಿಂದಾಗಿ ಗುಲ್ಬರ್ಗಾ, ಮೈಸೂರು, ಮಂಡ್ಯ, ಶಿವಮೊಗ್ಗಾದಲ್ಲಿ ಚಲನಚಿತ್ರ ಕ್ಲಬ್ಗಳು ಆರಂಭವಾಗಿವೆ.

ಇದೀಗ ಮೀಡಿಯಾ ಹೌಸ್ ಸ್ಟುಡಿಯೋದ ಮೂಲಕ ಹೊಸಬರಿಗೆ ಚಲನಚಿತ್ರ ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಬಿ.ಸುರೇಶ, ಆ ಸಂಸ್ಥೆಯಿಂದ ನಿರ್ಮಿಸಿದ ಪ್ರಥಮ ಚಿತ್ರ `ಗುಬ್ಬಚ್ಚಿಗಳು’ ಮೂಲಕ ಅಭಯಸಿಂಹ ಅವರು ನಿರ್ದೇಶಕರಾಗಿದ್ದಾರೆ. ಈ ಚಿತ್ರವು ಅದಾಗಲೇ ಲಾಸ್ಎಂಜಲೀಸ್, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲದೆ, ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕು ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪಾಲ್ಗೊಂಡಿದೆ. ಪ್ರಕಾಶ್ ರೈ ಅವರ ನಿರ್ದೇಶನದಲ್ಲಿ ‘ನಾನು ನನ್ನ ಕನಸು’ ಎಂಬ ಚಿತ್ರವನ್ನು ಪಾಲುದಾರರಾಗಿ ನಿರ್ಮಿಸಿದ್ದಾರೆ.

ಈಚೆಗೆ ಮರಳಿ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಆರಂಭಿಸಿರುವ ಬಿ.ಸುರೇಶ ಈಚೆಗೆ ಅಭಿನಯಿಸಿದ ‘ಸ್ಲಂಬಾಲ’ ಚಿತ್ರದ ನಟನೆಯಿಂದಾಗಿ ಹೆಸರು ಮಾಡಿದ್ದಾರೆ. ಅದರೊಂದಿಗೆ ‘ಜುಗಾರಿ’, ‘ಕಳ್ಳರಸಂತೆ’, ‘ಪರೋಲ್’ ಚಿತ್ರಗಳಲ್ಲೂ ಅಭಿಯಿಸಿದ್ದಾರೆ.

ಈಚೆಗೆ ಬಿ.ಸುರೇಶ ಅವರು ಅಭಿನಯಿಸಿದ (ಎಸ್.ಸುರೇಂದ್ರನಾಥ್ ನಿರ್‍ದೇಶಸಿದ) ‘ನಾ ತುಕಾರಾಂ ಅಲ್ಲ’ ನಾಟಕದಲ್ಲಿನ ಅಭಿನಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಬಿ.ಸುರೇಶ ಅವರು ಬರೆದ ‘ಗಿರಿಜಾ ಕಲ್ಯಾಣ’ ನಾಟಕವು ಸ್ಪಂದನ ತಂಡ ಮೂಲಕ ಬಿ.ಜಯಶ್ರೀ ಅವರ ನಿರ‍್ದೇಶನದಲ್ಲಿ ದೇಶದಾದ್ಯಂತ ಪ್ರದರ್ಶನ ಕಾಣುತ್ತಿದೆ. ಈ ನಾಟಕವು ಹಿಂದಿ ಮತ್ತು ಮರಾಠಿಗೂ ಅನುವಾದವಾಗಿದೆ. ಎಂ.ಎಸ್. ಸತ್ಯು ಅವರ ನಿರ‍್ದೇಶನದಲ್ಲಿ, ಇಪ್ಟಾ ಮುಂಬೈ ಮೂಲಕ ಪ್ರದರ್ಶನಗಳನ್ನು ಕಾಣುತ್ತಿದೆ.

೨೦೦೮ರ ಡಿಸೆಂಬರ್‍ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ. ೨೦೧೦ರಿಂದ ಸುಚಿತ್ರಾ ಫಿಲಂ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ೨೦೧೧ರ ಅಕ್ಟೋಬರ್‌ನಿಂದ ಸುಚಿತ್ರ ಫಿಲಂ ಅಂಡ್ ಕಲ್ಚರಲ್ ಅಕಾಡಮಿಯ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ.

ಈಗಲೂ ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬಿ.ಸುರೇಶ ಸಕ್ರಿಯವಾಗಿ ದುಡಿಯುತ್ತಿದ್ದಾರೆ.
ಬಿ.ಸುರೇಶ ಅವರ ಚಿತ್ರಕಥೆ/ ಸಂಭಾಷಣೆಯಿರುವ ಚಿತ್ರಗಳು

 1. ಮಿಥಿಲೆಯ ಸೀತೆಯರು [ನಿ: ಕೆ.ಎಸ್.ಎಲ್.ಸ್ವಾಮಿ(ರವೀ)]
 2. ಜಂಬೂಸವಾರಿ [ನಿ: ಕೆ.ಎಸ್.ಎಲ್.ಸ್ವಾಮಿ(ರವೀ)
 3. ಮನೆ [ನಿ: ಗಿರೀಶ್ ಕಾಸರವಳ್ಳಿ]
 4. ಹರಕೆಯಕುರಿ [ನಿ: ಕೆ.ಎಸ್.ಎಲ್.ಸ್ವಾಮಿ(ರವೀ)]
 5. ಹಸಿರು ಕೈ ಬೀಸಿ ಕರೆದಾವೋ [ನಿ: ಚಂದ್ರಶೇಖರ ಕಂಬಾರ]
 6. ಸ್ವಾಮಿ ವಿವೇಕಾನಂದ [ನಿ: ಜಿ.ವಿ.ಅಯ್ಯರ್]
 7. ರಸಿಕ [ನಿ: ವಿ.ರವಿಚಂದ್ರನ್]
 8. ಜಾಣ [ನಿ: ವಿ.ರವಿಚಂದ್ರನ್]
 9. ಪುಟ್ನಂಜ [ನಿ: ವಿ.ರವಿಚಂದ್ರನ್]
 10. ಸಿಪಾಯಿ [ನಿ: ವಿ.ರವಿಚಂದ್ರನ್]
 11. ಕಲಾವಿದ [ನಿ: ವಿ.ರವಿಚಂದ್ರನ್]
 12. ಮೊಮ್ಮಗ [ನಿ: ವಿ.ರವಿಚಂದ್ರನ್]
 13. ಚೆಲುವ [ನಿ: ವಿ.ರವಿಚಂದ್ರನ್]
 14. ಕರುಳಿನ ಕುಡಿ [ನಿ: ಸಾರಥಿ]
 15. ತಾಯವ್ವ [ನಿ: ಉಮಾಕಾಂತ್]
 16. ಠಪೋರಿ [ನಿ: ಬಿ.ಸುರೇಶ]
 17. ಅರ್ಥ [ನಿ: ಬಿ.ಸುರೇಶ]
 18. ಪುಟ್ಟಕ್ಕನ ಹೈವೇ [ನಿ: ಬಿ.ಸುರೇಶ]….    ….ಇದಲ್ಲದೆ ಇನ್ನೂ ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

ರಚಿಸಿ-ನಿರ್ದೇಶಿಸಿದ ಧಾರಾವಾಹಿಗಳು

 1. ಕಂದನಕಾವ್ಯ (೨೬ ಕಂತುಗಳು)
 2. ಹೊಸಹೆಜ್ಜೆ (೧೩ ಕಂತುಗಳು)
 3. ಕನಸುಗಿತ್ತಿ (ಟೆಲಿಫಿಲ್ಮ್ – ೨ ಕಂತುಗಳಲ್ಲಿ ಪ್ರಸಾರವಾಯಿತು)
 4. ಅನ್ನಪೂರ್ಣ (ಟೆಲಿಫಿಲ್ಮ್ – ೨ ಕಂತುಗಳಲ್ಲಿ ಪ್ರಸಾರವಾಯಿತು)
 5. ಮುಸ್ಸಂಜೆ (ಟೆಲಿಫಿಲ್ಮ್ – ೨ ಕಂತುಗಳಲ್ಲಿ ಪ್ರಸಾರ)
 6. ಚಿಗುರು (೩೨ ಕಂತುಗಳು)
 7. ಸಾಧನೆ (೫೭೨ ಕಂತುಗಳು)
 8. ಕನ್ನಡ-ಕನ್ನಡಿ (೨೬ ಕಂತುಗಳು)
 9. ಅಕ್ಷರದೀಪ (೨೬ ಕಂತುಗಳು)
 10. ಹತ್ತುಹೆಜ್ಜೆಗಳು (೨೬ ಕಂತುಗಳು)
 11. ಮಗು ನೀ ನಗು (೨೬೦ ಕಂತುಗಳು)
 12. ನಾಕುತಂತಿ (೧೪೭೦ ಕಂತುಗಳು)
 13. ತಕಧಿಮಿತಾ (೮೯೯ ಕಂತುಗಳು)

ರಚಿಸಿರುವ ನಾಟಕಗಳು

 1. ಕೋತಿಕತೆ
 2. ವರದಿಯಾಗದ ಕಥೆ
 3. ಅಪ್ಪಾಲೆತಿಪ್ಪಾಲೆ
 4. ಅಹಲ್ಯೆ ನನ್ನ ತಾಯಿ
 5. ಅಯ್ಯೋ ಅಪ್ಪಾ!
 6. ಕಾಡುಮಲ್ಲಿಗೆ
 7. ಕುಣಿಯೋಣು ಬಾರಾ
 8. ಯವನ ಯಾಮಿನಿ ಕಥಾ ಚರಿತ್ರವು
 9. ಅರ್ಥ
 10. ಹಜಾಮ ಹೆಂಡತಿಯನ್ನು ಕೊಂದದ್ದು
 11. ಕತೆ ಕಟ್ಟೋ ಆಟ
 12. ಷಾಪುರದ ಸೀನಿಂಗಿ ಸತ್ಯ
 13. ರೆಕ್ಕೆ ಕಟ್ಟುವಿರಾ?
 14. ಕುರುಡಜ್ಜನ ಪೂರ್ಣಚಂದ್ರ
 15. ಗಿರಿಜಾ ಕಲ್ಯಾಣ
 16. ಚಂದ್ರನ ನೆರಳಲ್ಲಿ…
 17. ಬಾಳೂರ ಗುಡಿಕಾರ (ಇಬ್ಸೆನ್‌ನ ‘ಮಾಸ್ಟರ್ ಬಿಲ್ಡರ್‌’ನ ಸ್ಪೂರ್ತಿಯಿಂದ)

ನಿರ್ದೇಶಿಸಿದ ಸಿನಿಮಾಗಳು

 1. ಠಪೋರಿ
 2. ಅರ್ಥ
 3. ಪುಟ್ಟಕ್ಕನ ಹೈವೇ

ಪಾಲುದಾರನಾಗಿ ನಿರ್ಮಿಸಿದ ಸಿನಿಮಾಗಳು

 1. ಗುಬ್ಬಚ್ಚಿಗಳು (ನಿ : ಅಭಯಸಿಂಹ)
 2. ನಾನು ನನ್ನ ಕನಸು

52 thoughts on “ಬಿ. ಸುರೇಶ ಪರಿಚಯ

 1. Ayyappa! neevenri neevu ishtella madidheera?
  Ishtu varshadhindha parichaya. Yenu goththe aglilvallri?
  You are unbelievably true kaNri!
  Ishtella madiddaru yaava pogaru illade iddiralla? adhe mahadashcharya kaNri!

 2. Pingback: ಕನ್ನಡ ರಂಗಭೂಮಿ ಮತ್ತು ಕನ್ನಡ ಪತ್ರಿಕೋದ್ಯಮ « ಸೈಡ್ ವಿಂಗ್ / Sidewing

 3. yenri neevu,ishtondu kelasa maadthira…nimage ontara different aadantha shakti ide..nanagu swalpa donation kodri…nimma lekanigalu bahala chennagirutte….they r really different!!!nimma kelasagalu heege munde saagali….

  -nimma ‘haage summane’ Puneeth
  [www.haagesummane.wordpress.com]

 4. ನಾನು ಒಂದು ಅತ್ಯುತ್ತಮ ಕಥೆ ಬರೆದಿದ್ದೇನೆ ಅದರ ಹೆಸರು ರಾಮ್,ರಹೀಮ್,ರೋಹನ್ ಎಂದು ಅದನ್ನು ಸಿನೆಮಾ ಮಾಡುವಾಸೆ, ನಿಮ್ಮಿಂದ ಸಹಾಯ ಸಿಗಬಹುದೇ?

 5. ಹೆಹ್ಹೆ…
  ಶಾನೆ ಹೊಗಳಬಾರದು. ಮನುಷ್ಯ ಭೂಮಿ ಮೇಲೆ ಇರ್‍ಬೇಕು…
  ಆದ್ರೂ ನಿಮ್ಮ ಮಾತು ಕೇಳಿ… ಊದ್ಕೊಂಡ್ ಬಿಟ್ಟಿದೀನಿ… ಈಗ ಯಾರ್‍ಗದ್ರೂ ಹೇಳಿ ಪಿನ್ ಚಿಚ್ಚಿಸ್ಕೊಂಡು ‘ಢಂ’ ಆಗ್ಬೇಕು…
  ಅಷ್ಟೇಯಾ…
  ಬೀಸು

 6. idralli beesu-ravara adbhutha nataneya slum-baala chitrada ullekavilladdu niraase thandide… Adu avara natanaa badukina mailigallu… beesu-rinda hosa drushya-kaavyada nireekshe-yalli

 7. ಕವೀಶ್ವರರೇ,
  ನೀವು ಗುರುತಿಸಿದ ತಪ್ಪನ್ನು ಕೂಡಲೇ ಸರಿಪಡಿಸಿದ್ದೇನೆ. ಸಲಹೆ-ಸೂಚನೆಗ ವಂದನೆಗಳು.
  ನಿಮ್ಮವ
  ಬೀಸು

 8. prathikriyege dhanyavaadaglu Beesu-ravare… adu kavishvara alla.. kavi-swara antha.. namma samoohada hesaru…

 9. Hello geleya,

  neenu nakkare haalu sakkare. samakaalina sangatigalaththa belaku chelluva ninna lekhanagalu nanage mechchugeyaagive. Ninna barahadalli eno onthara modiyu iruva haagide. haageye swalpa monachu kooda.

  ella yashassu ninnadaagali.

  GP RAMANNA

 10. ಥ್ಯಾಂಕ್ಯೂ ರಾಮಣ್ಣ
  ನಿನ್ನ ಪತ್ರ ಓದುವಾಗಲೇ ನಿನ್ನ ಬಾರಿಟೋನ್ ದನಿಯೂ ಕೇಳಿದಂತಾಗುತ್ತಿದೆ.
  ನಿಮ್ಮಂತಹವರ ಪ್ರೀತಿ ಇರುವವರೆಗೆ ಒಳ್ಳೆಯದನ್ನು ಮಾಡುತ್ತಾ ಇರುತ್ತೇನೆ.
  ನಿನ್ನವ
  ಬಿ.ಸುರೇಶ

 11. Mynaa mareyaada kurithu mounave… Muridu mouna shrunkale ilidu baa kale… Mynaa bagge maathadi Beesu..

 12. ನಮಸ್ಕಾರ ಸಾರ್,
  ನನ್ನ ಹೆಸರು ಮಂಜುನಾಥ. ತಳ್ಳಿಹಾಳ ತಮ್ಮ ಧಾರವಾಹಿಗಳನ್ನು ನೋಡಿದ್ದೇನೆ,
  ತುಂಬಾ ಚನ್ನಾಗಿವೆ,
  ನನ್ನ ಬ್ಲಾಗ್ “http://snehakkagi.blogspot.com” ಗೆ ಬೆಟ್ಟಿ ಕೊಡಿ
  ತಮ್ಮ ಸಲಹೆ ಸೂಚನೆಗಳನ್ನು ಕೊಡಿ,

  ಇಂತಿ ತಮ್ಮ
  **ಮಂಜುನಾಥ ತಳ್ಳಿಹಾಳ

 13. hai beesu,

  ninna naatakagala pratigalu siguva taana yaavudu. nanna mundina naataka ninnadaagirabeku. HAL kalavidaru aaduva naataka adaagiruththade. ninna baliye siguththade andre naane ninna ‘adda’kke lagge haakuve. coffee heeri, harati naataka kondoyyuve. Hoo antiya hoo…hoo..antiya

  PREETYINDA
  GPR

 14. nimma bagge thumba gottide nange andkobittidde.ayyayappa niventhadu marayre. istella barediddunta adirli nimadondu blog ide antha gottadadde ivattu adu hege nanage blog bagge gottaglilla b su ravare……

 15. ಅಕ್ಕಾ ವಿಮಲಾ…
  ನನ್ನ ಬಗ್ಗೆ ಹೆಚ್ಚು ತಿಳಿಯದೆ ಇದ್ದರೆ ಉತ್ತಮ ಅಲ್ವಾ?
  ಆಗ ನನ್ನ ಕೆಲಸವನ್ನು ಆ ಕೆಲಸದಿಂದ ಮಾತ್ರ ಗುರುತಿಸಬಹುದು. ಇಲ್ಲವಾದರೆ ಬಯೋಡಾಟ ಹಿಡಿದು ಚರಿತ್ರೆಯಲ್ಲಿ ಕಳೆದು ಹೋಗುತ್ತವೆ. ‘ಸಧ್ಯದ ಸಮಕಾಲೀನ’ ಅನ್ನುವುದೇ ಬದುಕಿರುವವರಿಗೆ ಮುಖ್ಯ.

  ಇರಲಿ ಬಿಡಿ ಅಕ್ಕಾ… ಅಷ್ಟೆಲ್ಲಾ ದೊಡ್ಡ ಮಾತ್ಯಾಕೆ?
  ನೀವು ನೋಡಿದಿರಲ್ಲ ನನಗದು ಸಂತಸ. ಹಬ್ಬದ ದಿನದ ಒಬ್ಬಟ್ಟು ತಿಂದಂಗಾಯ್ತು.
  ನಿಮ್ಮವ
  ಬೀಸು.

 16. Hey Beesu-ravare…. nivu thukaram alla antha gotthidru barthivi naataka nodoke… yenagi-yavru serkond yeno madtha iddiri.. olledaagli…

 17. namaskara sir, chennagidira nimmanna nagatihallili bheti
  madidde. avaginda nim taraha commercial cinema yella cinema ne alla anta vadisi geleyar jote jagala kaytidini. samudaya chitrotsavkke barokkaglilla. nimma nanu nanna kanasige all the best……

 18. ತುಂಬಾ ಇಷ್ಟ ವಾಯ್ತು ಈ ಸಾಲು “ಸಧ್ಯದ ಸಮಕಾಲೀನ ಅನ್ನುವುದೇ ಬದುಕಿರುವವರಿಗೆ ಮುಖ್ಯ”

 19. Hello,
  B Sureshji i saw your profile and it is very interesing, You are a one of the great Drama & Diretor , i beging for god ‘ll u long life, now i am from pune am also artist looking into making kannada serial if u interest please reply me, please.
  Any Way Best of luck

  best regurds,
  Sripad

 20. Dear sir

  your profile is really good and I feel you did a good service for our kannada (culture langauge media) somany common people like me,may not know you in depth do more and more good work.
  thankyou and al the best

  Nataraj(9986273204)

 21. Comred lal salam,
  Kiravantagagi marathi patrikege lekhana siddhapadisalu
  snehitarige nimma bio kalisalu bio nodide, tannage kelasa
  madiddu, madtirodu managande.khusi atu.
  nimma
  D.S.Chougale

 22. ನಾನು ಟಿಂಗರಬುಡ್ಡಣ್ಣ ನಾಟಕವನ್ನು ಮರೆಯುವುದು ಸಾಧ್ಯವೇ ಇಲ್ಲ. ಅದು ನನ್ನ ನಿರ್ದೇಶನದ ನಾಟಕ.
  ಅದನ್ನು ನಾನು ಮರೆತಿದ್ದೇನೆ ಎಂದು ನಿಮಗ್ಯಾಕೆ ಅನ್ನಿಸಿತು?

 23. melina listalli aa hesaru ellu kanislilla adakke kelide.
  anda hage aa natakadalli naanu ondu ckikkadada mestru paatra madidde.

 24. ನಾನು ನಿರ್ದೇಶಿಸಿದ ಎಲ್ಲಾ ನಾಟಕಗಳ ಪಟ್ಟಿಯನ್ನೂ ಅಲ್ಲಿ ಹಾಕಿಲ್ಲ. ನಾನು ಬರೆದ ನಾಟಕಗಳ ಪಟ್ಟಿ ಇದೆ. ಟಿಂಗರಬುಡ್ಡಣ್ಣ ನಾನು ಬರೆದ ನಾಟಕವಲ್ಲ. ಹಾಗಾಗಿ ಅಲ್ಲಿ ಹೆಸರಿಸಿಲ್ಲ.
  ನೀವು ಆ ನಾಟಕದಲ್ಲಿ ಸಣ್ಣ ಪಾತ್ರ ಮಾಡಿದ್ದಿರಿ ಎಂಬುದನ್ನು ನೆನಪಿಸಿಕೊಂಡಿರಿ. ಸಂತಸವಾಯಿತು. ಆ ನಾಟಕದಲ್ಲಿ ಅಜ್ಜನ ಪಾತ್ರ ಮಾಡಿದ್ದವರು ಈಗಲೂ ಆಗೀಗ ನನಗೆ ಸಿಗುತ್ತಾ ಇರುತ್ತಾರೆ. ಉಳಿದವರು ಬಹುತೇಕ ಕಾಣಿಸಿಲ್ಲ ಈಚೆಗೆ.
  ನೀವು ಈಗ ಮತ್ತೆ ಸಂಪರ್ಕಕ್ಕೆ ದೊರಕಿದ್ದೀರಿ. ಸಂತಸವಾಯಿತು.
  ನಿಮಗೆ ಒಳಿತಾಗಲಿ
  ನಿಮ್ಮವ
  ಬಿ.ಸುರೇಶ

 25. nimmalliro pratibhege sariyada avakasha siglilla antha nimage anisolva? athava srujana kalavidara tanda madida nimma taradovrinda srujana sheelate kammi idya? ee ella sankeernate
  inda horage banda prakash rai bagge enu heltira?

 26. ಕ್ಷಮಿಸಿ.
  ನನಗೆ ಸಿಕ್ಕ ಎಲ್ಲಾ ಅವಕಾಶಗಳನ್ನೂ ನಾನು ಉಪಯೋಗಿಸಿಕೊಂಡಿದ್ದೇನೆ.
  ನಾನು ಪ್ರಚಾರಪ್ರಿಯನಲ್ಲ ಆದ್ದರಿಂದ ನನ್ನ ಬಗ್ಗೆ ಮಾಧ್ಯಮದಲ್ಲಿ ಬಂದಿರುವ ವಿವರಗಳು ಕಡಿಮೆ ಇರಬಹುದು. ಆದರೆ ನನಗೆ ಸಿಕ್ಕದ್ದರಲ್ಲಿ ನಾನು ಸಂತೋಷವಾಗಿದ್ದೇನೆ.
  ಪ್ರಕಾಶ್ ಎತ್ತರಕ್ಕೆ ಬೆಳೆದಿದ್ದಾನೆ ಅನ್ನೋದು ನಿಮ್ಮ ಅನಿಸಿಕೆ. ಅವನಿಗೆ ನಮ್ಮ ಹತ್ತಿರ ಮಾತಾಡಿದಾಗೆಲ್ಲಾ ನಮ್ಮ ಸಾಧನೆ ದೊಡ್ಡದು ಅನ್ನಿಸುತ್ತದೆ. ಇದು ಯಾವಾಗಲೂ ಹಾಗೆ. ನಮಗೆ ಕಾಣುವುದು ಏನು ಅನ್ನುವುದಕ್ಕಿಂತ ನಾವು ಯಾವುದನ್ನು ಹೇಗೆ ನೋಡುತ್ತೇವೆ ಎನ್ನುವುದು ಮುಖ್ಯ.
  ಈಗ ನಾನು ಮಾಡುತ್ತಾ ಇರುವ ಆರು ಯೋಜನೆಗಳೂ ಯಶ್ವಿಯಾಗಿ ನಡೆಯುತ್ತಾ ಇವೆ. ಅದರ ಜೊತೆಗೆ ಅನೇಕ ಸಂಘಟನೆಗಳ ಕೆಲಸವನ್ನೂ ಮಾಡುತ್ತಾ ಇದ್ದೇನೆ. ಇವುಗಳು ಮುಂದೆ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತವೆ ಎಂದು ನಾನೂ ಕುತೂಹಲಿಯಾಗಿದ್ದೇನೆ.
  ಪ್ರಕಾಶ ನನ್ನ ಮುಂದಿನ ಸಿನಿಮಾದಗಳಿಗೂ ಪಾಲುದಾರ ಆಗಿರುತ್ತಾನೆ.
  ಇಷ್ಟು ಸಾಕು ಎಂದುಕೊಳ್ಳುತ್ತೇನೆ. ಇದಕ್ಕಿಂತ ಹೆಚ್ಚು ಮಾತಾಡಿದರೆ ನನ್ನ ತುತ್ತೂರಿ ನಾನೇ ಊದಿದ ಹಾಗೆ ಆಗಬಹುದು.
  ನಿಮಗೆ ಒಳಿತಾಗಲಿ.
  ಬಿ.ಸುರೇಶ

 27. Adu nanna yaktika anisike.Let us at leave it here.
  Bahushaha neevu Mr: Al Gore foundation avra global warming documentary nodirtira ankondidini.Aaa reeti prakriye neevu
  India nalli shuru madbohudu anta nange ansutte.

 28. Namaskaara Sir,

  Nanu Sadane daravahi prasaravagutiddaga 8ne taragatiyalli odutidde, shale 3ke bittaga manege odi barutidde e daravahjo nodalu (Specially Haadu:kaala munde naavu hinde…)..
  Ee haadu tamma bali iddare nanna melina minnanchege kalisikodi..

  Nimmava
  Naveen

 29. namaskaara .swalpa odhiye susthu.innestidheyo. congrads.nimage namma bage thiliyadhu. aaaadhare namage nimma bage thilidhirodharindhu innu swalpa aashavaadhigalaagidheevi. to follow ur tracks. saadhakara chalene sadhane anna kundu kaliyuvudhu belavigeya oundhu amshanu houdhu. so yaavagalu naaanu nimma vishayagalannu thilukolthidhe. haagaagi noduva maathaaaaduva thavaku jothege sambandha ondhu suli. ella seri eegeega samparka. thumbha kushi aayithu . love to see more from your side.

  keep giving more scripts and more movies.

 30. ಶಾಂತಿ ಅವರಿಗೆ,
  ನಮಸ್ಕಾರಗಳು.
  ನಿಮ್ಮ ಪ್ರತಿಕ್ರಿಯೆ ಓದಿದೆ. ಸಂತೋಷವಾಯಿತು.
  ಸಂಬಂಧ ಎಂಬುದು ದೊಡ್ಡ ಮಾತು. ಆ ಮಾತಿಗಿಂತ ನಾವು ಕನ್ನಡಿಗರು ಎಂಬ ಮಾತೇ ನಮ್ಮ ಸ್ನೇಹಕ್ಕೆ ಶಾಶ್ವತ ಕೊಂಡಿಯಾಗಲಿ.
  ನಿಮಗೆ ಒಳಿತಾಗಲಿ.
  ನಿಮ್ಮವ
  ಬಿ.ಸುರೇಶ

 31. ೧೭ ಚಿತ್ರಗಳಿಗೆ ಸಂಭಾಷಣೆ ಹಾಗು ಚಿತ್ರಕಥೆ
  ೧೩ ದಾರಾವಾಹಿಗಳ ರಚನೆ ನಿರ್ದೇಶನ
  ೧೭ ನಾಟಕಗಳ ಕರ್ತೃ
  ೩ ಸಿನಿಮ ನಿರ್ದೇಶನ
  ೨ ಸಿನಿಮ ನಿರ್ಮಾಣ

  ಸಾಲೋಪಸಾಲು ಪ್ರಶಸ್ತಿಗಳು !!!!!!!!!! ಅಧ್ಬುತ ಸರ್ ….

  ನೀವು ದಾರವಾಹಿ ನಿರ್ದೇಶಕ ಅಂತ ಅಷ್ಟೇ ತಿಳ್ಕೊಂಡು ತಪ್ಪು ಮಾಡಿದ್ದೆ
  ಈಗಲೇ ಗೊತ್ತಾಗಿದ್ದು ನಾನೊಬ್ಬ ಸಾಧಕರ ಬಗ್ಗೆ ಓದ್ತಾ ಇದ್ದೀನಿ ಅಂತ..
  ನಿಧಾನ ಆದರು ಓದಿದ್ದಕ್ಕೆ ಸಾರ್ಥಕ ಆಯ್ತು..

  ನಿಮ್ಮ
  ಸೂರ್ಯ

 32. Oh my God…You are a genius. After reading the introduction page of yours, I am speechless. You are so down to earth, humble and modest, I had no clue about all your achievements and accomplishments in many fields. Kudos.

 33. ನಮಸ್ಕಾರ ವಿಮಲಾ (ಪ್ಲಾನೆಟ್ ವಿವೇಷಿಯಸ್) ಅವರೇ,
  ನಿಮ್ಮ ಪ್ರತಿಕ್ರಿಯೆ ಓದಿ ಸಂತಸವಾಯಿತು.
  ನಿಮ್ಮಂತಹ ಗೆಳೆಯರ ಹಾರೈಕೆ ಇರುವವರೆಗೆ ನಾನು ಒಳಿತನ್ನು ಮಾಡಲು ಪ್ರಯತ್ನಿಸುತ್ತೇನೆ.
  ನಿಮಗೆ ಒಳಿತಾಗಲಿ.
  – ಬಿ.ಸುರೇಶ

 34. Sir

  I have done my studies in Kannada medium..Govt School…..now i working in Mphasis….i used to watch ur “`ಸಾಧನೆ”…..ಪಟ್ಟು ಹಿಡಿದರೆ ಸಣ್ಣ ಯೋಚನೆ .. ಆಗಲಾರದೆ ದೊಡ್ಡ ಸಾಧನೆ ..these lines..are inspiring me…to achieve something..now..i’am on the way…”SADHANE YA HADIYALLI..”….I Have seen you many times..just 2 years back i used to work in “Payana Travels ” with Murali sir..Next to your Studio…i’am looking for “Sadhane” serial C.D or DVD..can you tell me where i can get it……..?plz…i’am very proud to say that your from davanagere..near to my home town chitradurga…Keep rocking….

  Thanks & Regards

  Aravind

 35. Sir

  I have done my studies in Kannada medium..Govt School…..now i’am working in Mphasis….i used to watch ur “`ಸಾಧನೆ”…..ಪಟ್ಟು ಹಿಡಿದರೆ ಸಣ್ಣ ಯೋಚನೆ .. ಆಗಲಾರದೆ ದೊಡ್ಡ ಸಾಧನೆ ..these lines..are inspiring me…to achieve something..now..i’am on the way…”SADHANE YA HADIYALLI..”….I Have seen you many times..just 2 years back i used to work in “Payana Travels ” with Murali sir..Next to your Studio…i’am looking for “Sadhane” serial C.D or DVD..can you tell me where i can get it……..?plz…i’am very proud to say that you are from davanagere..near to my home town chitradurga…Keep rocking….

  Thanks & Regards

  Aravind

 36. Hello Sir,

  Namasthe Hegidiri Sir,

  Nanage nima SADHANE Serial Song tumba esta u know adu nanage tumba inspiration kota song adu.

  Nanu ome exam nalli fail agidaga nima e sadane song inspiration agi kelasa madi nanu nana guri talupalu sadya madi pass aguvate maditu

  egalu kuda e song nange inspiration agide

  ENO MADIDE NINU ELLI BANDU
  ENDU KELO LOKAKE SIDDA NANU EEDU
  BISO GALIYALI BANDU NITU
  ALLI DIPA HACHIDARE ADE BALU ENDU
  PATTU HIDIDARE SANNA YOCHANE
  AGALARADHE DODDA SADHANE

  REALLY GREART song sir

  hands off to u and Hamsalekha Sir

  pls aa song naa website nalli siguvatne madi youths ge inspiration siguvate madi

  even takadimita song is unforgetable

  GREAT SIR

 37. ENO MADIDE NINU ELLI BANDU
  ENDU KELO LOKAKE SIDDA NANU EENDU
  BISO GALIYALI BANDU NITU
  ALLI DIPA HACHIDARE ADE BALU ENDU
  PATTU HIDIDARE SANNA YOCHANE
  AGALARADHE DODDA SADHANE

  REALLY GREART song sir

  hands off to u and Hamsalekha Sir

  pls aa song naa website nalli siguvatne madi youths ge inspiration siguvate madi

  even takadimita song is unforgetable

  SOWMYA V KUMAR

 38. ಸೌಮ್ಯ ಮತ್ತು ಅರವಿಂದ್ ಅವರಿಗೆ ಧನ್ಯವಾದಗಳು.
  ಅರವಿಂದ್ ಅವರೇ, ‘ಸಾಧನೆ’ ಧಾರಾವಾಹಿಯನ್ನು ಡಿವಿಡಿ ಮಾಡಲಿಲ್ಲ. ಆ ನಿರ್ಮಾಪಕರಿಗೆ ತಿಳಿಸದ್ದೇನೆ. ಅವರು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಈಗ ಆ ಕೆಲಸ ಕಷ್ಟ. ನೋಡುವ. ಏನಾಗುವುದೋ ತಿಳಿಯದು.

 39. itz ok sir….yake neevu….kannada Bhava Geethe gallnnu,,balsi..ondu…Dharavahi yannu madabaradu..ha..kannada dalli bhala sundaravaada..impaanda..bhavageehtegalive..adnnella balasi..ondu dharavahiyannu madidare..sugasagiruttade..embudu nanna anisike..

  Haagu…Maasti yavara kathe galnnu balasi..dharavahi yannu madabhudalla..?

 40. Sureshanna,

  Nimage thumba thumba thumba dhyanyawaadagalu. Nanna ammanige thumba kushi aaguthe. Dayavittu nimma snehitara list nalli nange irokke awakaasha maadikodi.

Leave a Reply

Your email address will not be published. Required fields are marked *